ರೇಷ್ಮಾ ನಿಲೋಫರ್ ವಿಶಾಲಾಕ್ಷಿ ಅವರು ಭಾರತೀಯ ಕಡಲ ಪೈಲಟ್ ಆಗಿದ್ದು, ಅವರು ಪ್ರಸ್ತುತ ಸಮುದ್ರದಿಂದ ಕೋಲ್ಕತ್ತಾ ಮತ್ತು ಹಲ್ದಿಯಾ ಬಂದರಿಗೆ ಹಡಗುಗಳನ್ನು ಚುಕ್ಕಾಣಿ (ಸ್ಟೀರಿಂಗ್ )ಮಾಡುವುದರಲ್ಲಿ ತೊಡಗಿಸಿಕೊಂಡಿದ್ದಾರೆ. 2018 ರಿವರ್ ಪೈಲಟ್ ಆಗಿ ಅರ್ಹತೆ ಪಡೆದ ನಂತರ ಅವರು ಮೊದಲ ಭಾರತೀಯ ಮತ್ತು ವಿಶ್ವದ ಕೆಲವೇ ಮಹಿಳಾ ನೌಕಾ ಪೈಲಟ್‌ಗಳಲ್ಲಿ ಒಬ್ಬರಾದರು. ಅವರು ಭಾರತದ ರಾಷ್ಟ್ರಪತಿಗಳಾದ ರಾಮ್ ನಾಥ್ ಕೋವಿಂದ್ ಅವರಿಂದ 2019 ರಲ್ಲಿ ನಾರಿ ಶಕ್ತಿ ಪುರಸ್ಕಾರ್ ಪ್ರಶಸ್ತಿಯನ್ನು ಪಡೆದರು. ಅವರು 2011 ರಲ್ಲಿ ಕೋಲ್ಕತ್ತಾ ಪೋರ್ಟ್ ಟ್ರಸ್ಟ್‌ಗೆ ಪ್ರಶಿಕ್ಷಣಾರ್ಥಿಯಾಗಿ ಸೇರಿದರು ಮತ್ತು 2018 ಹೂಗ್ಲಿ ನದಿಯ ಪೈಲಟ್ ಆದರು. ರಾಂಚಿಯ ಬಿರ್ಲಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಸಾಗರ ತಂತ್ರಜ್ಞಾನದಲ್ಲಿ ಬಿಇ ಪದವಿ ಪಡೆದಿದ್ದಾರೆ. == ಸಹ ನೋಡಿ == ಅಭಿನಂದನ್ ವರ್ತಮಾನ್ == ಉಲ್ಲೇಖಗಳು ==